ಸುವರ್ಣದ ಹೊಸ ಧಾರಾವಾಹಿ ೫೦ ಲಕ್ಷ ಬಜೆಟ್ ಹರ ಹರ ಮಹಾದೇವ
Posted date: 15 Fri, Jul 2016 – 04:58:26 PM

 ಭಾರತದ ರೀಜಿನಲ್ ಚಾನಲ್‌ಗಳಲ್ಲಿ ಹೊಸ ಸಂಚಲವನ್ನು ಮೂಡಿಸುತ್ತಿರುವ ಸುವರ್ಣ ವಾಹಿನಿಯ ಹರ ಹರ ಮಹಾದೇವ ಹೊಸ ಇತಿಹಾಸವನ್ನು ನಿರ್ಮಿಸಲು ಹೊರಟಿದೆ. ಕನ್ನಡದ ಚಾನಲ್ ಇದೇ ಮೊದಲ ಬಾರಿಗೆ  ೬೦ಕೋಟಿ ಬಜೆಟ್‌ನಿಂದ ಇಂತಹ ಧಾರಾವಾಹಿಯನ್ನು ಪ್ರಾರಂಭಿಸುತ್ತಿದೆ.
 ಈ ಧಾರಾವಾಹಿಯ ಮತ್ತೊಂದು ದಾಖಲೆ ಎಂದರೆ  ಈ ಧಾರಾವಾಹಿಯ ಪ್ರೋಮೋ.ಇನ್ಮೂಂದೆ ಪ್ರತಿ ದಿನ ನಿಮ್ಮ ಮನೆಯಲ್ಲಿ ಶಿವರಾತ್ರಿ ಎಂದು ಹೇಳಲು ಹೊರಟಿರುವ ಪ್ರೋಮೋ ಕೂಡಾ ೫೦ಲಕ್ಷ ಮೊತ್ತದ್ದಾಗಿದೆ. ಇದೇ ಪ್ರಥಮ ಬಾರಿಗೆ ಬೃಹತ್ ಮೊತ್ತದಿಂದ ತಯಾರಿಸಿದ ಪ್ರೋಮೋ ಈಗಾಗಲೇ ಸುವರ್ಣ ವಾಹಿನಿಯಲ್ಲಿ ಮತ್ತು ಎಲ್ಲ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಇಂಥಹ ಅದ್ಭುತವಾದ ಪ್ರೋಮೋವನ್ನು ನಿರ್ಮಿಸಲು ಬೃಹದಾಕರದ ಸೆಟ್‌ನ್ನು ಮುಂಬೈಯಲ್ಲಿ ಹಾಕಿದ್ದಾರೆ. ೨೦೦ಕ್ಕೂ ಹೆಚ್ಚು ಜನ ಕಾರ್ಮಿಕರು ಮತ್ತು ೨೫೦ ಸಹ ಕಲಾವಿದರು ಇದರ ಯಶಸ್ವಿಗೆ ಕಾರಣರಾಗಿದ್ದಾರೆ.ಅಷ್ಟೆ ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಗ್ರಾಫಿಕ್ ಡಿಸೈನರ‍್ಸ್  ತಮ್ಮ ಕೈಚಳಕದಿಂದ ಈ ಪ್ರೋಮೋಗೆ ಇನ್ನಷ್ಟು ಮೆರಗು ನೀಡಲು ಸಾಕ್ಷಿಯಾಗಿದ್ದಾರೆ.
ಈಗಾಗಲೆ ಹರ ಹರ ಮಹಾದೇವಪ್ರೋಮೋ ಕೋಟ್ಯಾಂತರ ವೀಕ್ಷಕರ ಮನದಲ್ಲಿ ಛಾಪು ಮೂಡಿಸಿದೆ ಎಂದರೆ ಇನ್ನು ಧಾರಾವಾಹಿ ಯಶಸ್ವಿಯಾಗುವುದು ಖಂಡಿತ ಎಂಬುದು ಸುವರ್ಣ ವಾಹಿನಿಯ ಆಶಯ.
ಇಂಥಹ ಭಾರಿಮೊತ್ತದ ಹರ ಹರ ಮಹಾದೇವ ಇದೇ ಜುಲೈ ೨೫ರಿಂದ ರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಮೂಡಿಬರಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed